Sunday, November 27, 2011

ಇ ಬ್ಲೊಗ್ ನನ್ನ ಸ್ವಾಮಿಗೆ ಅರ್ಪನೆ

ಸ್ವಾಮಿ ಯಲ್ಲರಿಗು ಒಳ್ಳೆದು ಮಾಡು

ಶ್ರೀ ಗುರು ತಿಪ್ಪೇರುದ್ರಸ್ವಾಮಿಯಾ ರಥೋತ್ಸವ


ರಥೋತ್ಸವ ನಡೆಯೋದು ಪ್ರತಿ ಪಲ್ಗುಣದ ಚಿತ್ತಾ ನಕ್ಷತ್ರದ ದಿನ ,ಆ ದಿನ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜೀವೈಕ್ಯವಾದ ದಿನ ,
ಆ ದಿನ ಸ್ವಾಮಿಯನ್ನು ಬೃಹತ್ ರಥದಲ್ಲಿ ಕೂಡಿಸಿ ರಥವನ್ನು ಸಮಾಧಿ ಮಠಕ್ಕೆ ಕೊಂಡೊಯುತ್ತಾರೆ .
ಬಹಳ ಜೋರಾಗಿ ನಡೆಯೋ ಇ ಜಾತ್ರೆಗೆ ಲಕ್ಷ ಲಕ್ಷ ಜನ ಸಮೊಹನೆ ಅರಿದು ಬರುತ್ತೆ ,
ಅ ದಿನ ತಿಪ್ಪೇಶನ ದರ್ಶನ ಪಡಿಯೋದು ಅಷ್ಟು ಸುಲಬ ಅಲ್ಲ ,ಯಾಕಂದ್ರೆ  ತಿಪ್ಪೇಶನ ಮಹಿಮೆಗೆ ಮನಸೋತು ಅಪಾರ ಸಂಖೆಯಲ್ಲಿ ಜನರು ಬೇರೆ ಬೇರೆ ಊರುಗಳಿಂದ  ಮತ್ತು ಬೇರೆ ಬೇರೆ ರಾಜ್ಯ ಗಳಿಂದ ದರ್ಶನಕಾಗಿ ಬರುತ್ತಾರೆ .
ಅ ದಿನ ರತೋತ್ಸವ ನೋಡೋದು ತುಂಬಾ ಚೆಂದ . ರತೋತ್ಸವ ನಡೆಯುವಾಗ ಜನರು ತಿಪ್ಪೆಶನನ್ನು  ನೆನೆಯುವ ಪರಿ ಕಿವಿಗಳಿಗೆ ತಂಪು ಕೊಡುತದೆ.
ಅಷ್ಟು ಸಂಖೆಯಲ್ಲಿ ಜನ ಸಾಗರ ಅರಿದು ಬಂದ್ರು ಅಲ್ಲಿ ಒಂದೇ ಒಂದು ಅವಗಡ ಸಂಬವಿಸುವುದಿಲ್ಲ ,ಯಾಕಂದ್ರೆ ಸ್ವಾಮಿಯ ಮಹಿಮೆ ಅಪಾರ .ಇ ಜಾತ್ರೆ ೮ ದಿನಗಳ ಕಾಲ ನಡೆಯುತ್ತೆ .

ರಥದ ವಿಶೇಷ

ರಥದ  ಆಕರ್ಷಣೆ  ಏನು ಗೊತ್ತಾ :
ಇ ರಥ 16 ಅಡಿ ಎತ್ತರ ಇದೆ.
ಇ ಭವ್ಯ, ದಿವ್ಯ, ಸುಂದರ ರಥವನ್ನು ಯಳೆಯಲು ಬೃಹದಕರವಾದ ಹಗ್ಗವನ್ನು ಬಳಸುತ್ತಾರೆ .ಇ ಹಗ್ಗ ತಯಾರಿಸುವವರು ಗ್ರಾಮದ ಆದಿ ಕರ್ನಾಟಕದವರು .


ಬೃಹದಕರವಾದ ೧೬ ಆಡಿ ರಥವನ್ನು ಹಗ್ಗದಿಂದ ಬಂಧಿಸಿ ರಥವನ್ನು ಯಳೆಯುವಾಗ ಯಲ್ಲಿ ನೋಡಿದರಲ್ಲಿ ಜನಸಾಗರ ,
ಬಕ್ತರ ಜಯಕಾರ, ಸಂಬ್ರಮ ಅನವರತ ಇ ದಿವ್ಯ ದರ್ಶನ ಪಡೆಯುವ ಕಣ್ಣುಗಳೇ ದನ್ಯ ದನ್ಯ ದನ್ಯ .

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ತಾನ ಇರುವ ಸ್ಥಳ


ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ತಾನ ಇರುವ ಸ್ಥಳ:
ಚಿತ್ರದುರ್ಗ ಜಿಲ್ಲೆಯ ಚಳ್ಳಿಕೇರೆ ತಾಲುಕಿನ ನಾಯಕನಹಟ್ಟಿ ಹಳ್ಳಿಯಲ್ಲಿ